ರಘುವೀರ್ ಚೌಧರಿ ಗುಜರಾತಿ ಸಾಹಿತಿ ಹಾಗೂ ವಿಮರ್ಶಕ. ಪತ್ರಿಕೆಗಳ ಅಂಕಣಕಾರ. ಅನೇಕ ಸಾಹಿತ್ಯಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ೫೧ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. == ಜೀವನ, ವಿದ್ಯಾಭ್ಯಾಸ, ವೃತ್ತಿ == ೦೫ ಡಿಸೆಂಬರ್ ೧೯೩೮ರಲ್ಲಿ ಗುಜರಾತ್‍ನ ಗಾಂಧಿನಗರ ಸಮೀಪದ 'ಬಾಪುಪುರ' ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ದಲ್‍ಸಿಂಗ್, ತಾಯಿ ಜೀತಿಬೆನ್. ೧೯೬೦ರಲ್ಲಿ ಬಿ.ಎ. ಪದವಿ ಹಾಗೂ ೧೯೬೨ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆ ಮತ್ತು ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ೧೯೭೭ರಲ್ಲಿ ಎಂಬ ವಿಷಯದಲ್ಲಿ ಪಿ.ಎಚ್.ಡಿ ಪಡೆದರು. ಗುಜರಾತ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದು ೧೯೯೮ರಲ್ಲಿ ನಿವೃತ್ತರಾದರು. 1970ರಲ್ಲಿ ಭಾರತದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ 'ನವನಿರ್ಮಾಣ ಚಳುವಳಿ'ಯಲ್ಲಿ ಭಾಗವಹಿಸಿದ್ದರು == ಸಾಹಿತ್ಯ ಕೃಷಿ == ಇವರು ಕವನ, ಕಾದಂಬರಿ, ನಾಟಕ, ವಿಮರ್ಶೆ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಮುಖ್ಯವಾಗಿ ಗುಜರಾತಿ ಭಾಷೆಯಲ್ಲಿ ಸಾಹಿತ್ಯ ರಚಿಸುತ್ತಾರೆ ಹಾಗೂ ಕೆಲವು ಹಿಂದಿ ಭಾಷೆಯ ಲೇಖನಗಳನ್ನೂ ಬರೆದಿದ್ದಾರೆ. ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಇವರು ಪತ್ರಿಕೆಗಳಲ್ಲೂ ಸಕ್ರಿಯರಾಗಿದ್ದು ಸಂದೇಶ್, ಜನ್ಮಭೂಮಿ, ನಿರೀಕ್ಷಕ, ದಿವ್ಯಭಾಸ್ಕರ್ ಮುಂತಾದ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ಇವರ ರುದ್ರಮಹಾಲಯ ಗುಜರಾತ್‍ನ ಐತಿಹಾಸಿಕ ಕಾದಂಬರಿ ಖ್ಯಾತವಾಗಿತ್ತು. ಅವರ ಕಾದಂಬರಿಗಳಲ್ಲಿರುವ ಹಾಸ್ಯಪ್ರವೃತ್ತಿ ಉಳಿದ ಲೇಖಕರಿಗಿಂತ ಭಿನ್ನ. ಅವರ ಕೆಲವು ಪ್ರಮುಖ ಕೃತಿಗಳು ಹೀಗಿವೆ. === ಪ್ರಮುಖ ಕಾದಂಬರಿಗಳು === ಅಮೃತ ವೇಣುವತ್ಸಲಾ ಸೋಮುತೀರ್ಥ ಪೂರ್ವರಂಗ್ ಆವರಣ್ === ಪ್ರಮುಖ ನಾಟಕಗಳು === ತ್ರಿಷೋ ಪುರಶ್ ಸಿಕಂದರ್ ಸಾನಿ === ಪ್ರಮುಖ ನಾಟಕಗಳು === ತಮಸಾ ವಹೇತಾ ವೃಕ್ಷ ಪವನ್ಮಾ === ಪ್ರಮುಖ ಸಣ್ಣಕತಾ ಸಂಗ್ರಹಗಳು === ಆಕಸ್ಮಿಕ್ ಸ್ಪರ್ಶ ಜೆರ್ ಸಮಾಜ್ == ಪ್ರಶಸ್ತಿ, ಮನ್ನಣೆಗಳು == ೧೯೭೭ರಲ್ಲಿ 'ಉಪರ್ವಾಸ್'() ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೬೫-೭೦ರ ನಡುವೆ ಅನೇಕ ರಾಜ್ಯಪ್ರಶಸ್ತಿಗಳು ೨೦೧೫ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ. ಅವರ ಬರಹಗಳಿಗೆ ‘ಕುಮಾರ್‌ ಚಂದ್ರಕಾ’ ಪುರಸ್ಕಾರ, ‘ಉಮಾ ಸ್ನೇಹರಶ್ಮಿ’ ಮತ್ತು ‘ರಂಜಿತ್‌ರಾಮ್ ಚಿನ್ನದ ಪದಕ’ದ ಗೌರವ ಸಂದಿದೆ. == ಉಲ್ಲೇಖಗಳು == == ಹೊರಸಂಪರ್ಕಗಳು == તમસા ( કાવ્યસંગ્રહ) / રઘુવીર ચૌધરી -ತಮಸಾ, ಗುಜ್ ಲಿಟ್ ತಾಣದಲ್ಲಿ ಚೌಧರಿಯವರ ಕವನ ಸಂಗ್ರಹ (ಗುಜರಾತಿ ಭಾಷೆಯಲ್ಲಿದೆ) 2016-12-20 ವೇಬ್ಯಾಕ್ ಮೆಷಿನ್ ನಲ್ಲಿ.